about

About Us

ಒಮ್ಮೆಯಾದರೂ ನೋಡಬನ್ನಿ ” ನೆಲದ ಸಿರಿಗೆ ”

about_1

ಒಮ್ಮೆಯಾದರೂ ನೋಡಬನ್ನಿ ” ನೆಲದ ಸಿರಿಗೆ ” ಗ್ರಾಮೀಣ ಸೊಗಡಿನ ಶೈಕ್ಷಣಿಕ ಮತ್ತು ಸಮಗ್ರ ಕೃಷಿ ಕೇಂದ್ರ ಬೆಂಗಳೂರು ಅಂದ ಕೂಡಲೇ ನೆನಪಾಗುವುದು ಸಿಲಿಕಾನ್ ಸಿಟಿ ಎಂದು. ಇಲ್ಲಿಯ ತಂಪು ಹವೆಯ ಕಾರಣದಿಂದ  ಎಂದೋ ಎಲ್ಲರಿಗು ಮೆಚ್ಚುಗೆಯಾದ ಸ್ಥಳ. ಜಾತಿ ಭೇದವಿಲ್ಲದೆ ಎಲ್ಲರಿಗೂ ಇದು ಸ್ವರ್ಗ. ಆದರೆ ದಿನೇ ದಿನೇ ಹೆಚ್ಚುತಿದೆ ಸಮಸ್ಯೆಯ ಮಹಾಪೂರ. ವಾಹನಗಳ ಸಂಖ್ಯೆ, ವಲಸಿಗರ ಸಂಖ್ಯೆ ಹೀಗೆ ಹತ್ತು ಹಲವು ಸಮಸ್ಯೆ ಗಳನ್ನೂ ಕಾಡುತಿದೆ ಬೆಂಗಳೂರೆಂಬ ಮಹಾನಗರಿಗೆ . ಇಲ್ಲಿನ ಅಡಿ ಭೂಮಿಗೂ ಸಾವಿರಾರು ರೂಪಾಯಿಗಳು. ಈ ನಿಟ್ಟಿನಲ್ಲಿ 6 ಎಕರೆ ಭೋಮಿ ಖರೀದಿಸಿ ಪಲವತ್ತು ಮಾಡಿ ಸಾವಿರಾರು ಗಿಡ ಮರಗಳನ್ನು ಬೆಳಸಿ ಕೃಷಿ ಪರಂಪರೆಯನ್ನು ಬಿಟ್ಟು ಬಂದ ನವನಾಗರೀಕರಿಗೆ ಮತ್ತು ಇಂದಿನ ಯುವ ಪೀಳಿಗೆಗೆ ಸಮಗ್ರ ಕೃಷಿಯ ಪರಿಚಯವಾಗಬೇಕು ಮತ್ತು ಅನುಭವಿಸಬೇಕು ಎಂಬ ಚಿಂತನೆಯ ಚಿಲುಮೆಯನ್ನು ಕಟ್ಟಿ, ಅದಕ್ಕೆ ” ನೆಲದ ಸಿರಿ” ಎಂಬ ಹೆಸರನಿಟ್ಟು ಬೆಳಸಿದವರು ಶ್ರೀ ಡಾ . H . k  ಗೋಪಾಲ ಕೃಷ್ಣ ರವರು ಮತ್ತು ಅವರ ಪತ್ನಿ ಶ್ರೀಮತಿ  ವಂದನ ರವರು. ಮೂಲತಃ ಸಿವಿಲ್ ಇಂಜಿನಿಯರ್ ಆಗಿ ಮತ್ತು ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡವರು. ನೆಲದ ಸಿರಿ ಅವರ ಕನಸಿನ ಕೂಸು. ಕಾಲ ಬದಲಾಗುತ್ತಿದೆ ಎಲ್ಲರು ತಂತ್ರಜ್ಞಾನದತ್ತ ಹೊರಳುತ್ತಿದ್ಧಾರೆ. ಹಣವೆಂಬ ಮಾಯೆಯಲಿ ನವನಾಗರಿಕತೆ ತೇಲುತ್ತಿದೆ ಮತ್ತು ಕೃಷಿಯನ್ನು ಮರೆಯುತ್ತಿದೆ. ಎಂದು ಮನಗಂಡು ಸಮಗ್ರ ಕೃಷಿ  ಶೈಕ್ಷಣಿಕ ಕೇಂದ್ರವನ್ನು ಬೆಳೆಸಿದ್ದಾರೆ.

ವಿದ್ಯಾಭ್ಯಾಸದ ಜೊತೆಗೆ ಕೃಷಿಯ ಸಮಗ್ರ

about2

ಇಂದಿನ ಪೀಳಿಗೆಯು ಸಾಮಾನ್ಯ ವಿದ್ಯಾಭ್ಯಾಸದ ಜೊತೆಗೆ ಕೃಷಿಯ ಸಮಗ್ರ ಪರಂಪರೆಯನ್ನು ಇಲ್ಲಿ ನೋಡಬಹುದು. ಎಲ್ಲ ಜಾತಿಯ ನೂರಾರು ಗಿಡಗಳನ್ನು ಪರಿಚಯ ಮಾಡಿಕೊಳ್ಳಬಹುದು. ಇದರ ಜೊತೆಗೆ ಕೃಷಿ ಮಾಡಲು ಆಸಕ್ತರಿಗೆ ಜಾಗವನ್ನು ಕೊಡಲಾಗುವುದು. (ಆ ಜಾಗದಲ್ಲಿ ಭೂಮಿಯನ್ನು ಹದಗೊಳಿಸಿ, ಸಾವಯವ ಗೊಬ್ಬರವನ್ನು ಕೊಟ್ಟು ನೀರುಣಿಸಿ, ತಮಗೆ ಬೇಕಾದ ಸಸ್ಯ ಅಥವಾ ಬೀಜ ಬಿತ್ತಿ ಪಾಲನೆ ಮಾಡುವುದು)  ವಾರಾಂತ್ಯದಲ್ಲಿ ತಮ್ಮ ಕೈ ತೋಟದಲ್ಲಿ ಕೆಲಸಮಾಡಿ ತಾವು ಬೆಳೆದ ತರಕಾರಿಗಳನ್ನು ನಿಮ್ಮ ಮನೆಗೆ ಉಪಯೋಗಿಸಬಹುದು. ಇಲ್ಲಿ ನುರಿತ ಕೃಷಿ ತಜ್ಞರ ಜೊತೆ ಸಂವಾದ ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು. ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಬಂದು ಒಂದು ದಿನ ಕೃಷಿಯ ನೈಜ ಪರಿಸರದಲ್ಲಿ ವಿರಮಿಸಬಹುದು.

ಬೃಹದಾಕಾರದ ಇಂಗು ಗುಂಡಿ ( 20 ಲಕ್ಷ ಲೀಟರ್)

about3

ಬೃಹದಾಕಾರದ ಇಂಗು ಗುಂಡಿ ( 20 ಲಕ್ಷ ಲೀಟರ್), 200 ವರ್ಷಗಳ ಬಾವಿ, ಕಲ್ಲಿನ ಚಪ್ಪರಗಳು. ಅಪರಮಿತಾ ಈಜುಕೊಳ, ಕೃಷಿಯ ವಸ್ತುಸಂಗಹಾಲಯ, ದನ ಕರುಗಳ ಕೊಟ್ಟಿಗೆ, ಬಾತು ಕೋಳಿ, ಟರ್ಕಿ, ಕುರಿ, ಮೇಕೆ, ಮೊಲ ಮತ್ತು ಹಂದಿಗಳ ಪಾಲನೆ ಮತ್ತು ಪೋಷಣೆ, ಆಟವಾಡಲು ಯೋಗ್ಯವಾದ ಆಟಿಕೆಗಳು, ಮರಕೋತಿಯಾಟ, ಚಿನ್ನಿದಾಂಡು, ಲಗೋರಿ, ಬೈನಾಕುಲಾರ್ ಮೂಲಕ ಹಕ್ಕಿಯ ವೀಕ್ಷಣೆ, ಹತ್ತು ಹಲವು ಮನರಂಜನೆಯೂ ಇಲ್ಲುಂಟು. ಇದರ ಜೊತೆಗೆ ಜೇನು ಕೃಷಿಯ ಮಾಹಿತಿಯು ಸಿಗುತ್ತದೆ. ಹೀಗೆ ಹಲವಾರು ಉದ್ದೇಶಗಳನ್ನು ನನಸಾಗಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ ನೆಲದ ಸಿರಿ. ಈ ಎಲ್ಲವನ್ನು ಶಿಕ್ಷಣದ ಮೂಲಕ ಶಾಲಾಮಕ್ಕಳಿಗೆ ತಿಳಿಸಲಾಗುತ್ತದೆ. ತೋಟ ವಿಸ್ತೀರ್ಣದಲ್ಲಿ ಚಿಕ್ಕದಾದರೂ ಬರುವ ಅಥಿತಿಗಳು ಕೃಷಿಯ ಬಗ್ಗೆ ಎಲ್ಲ ವಿವರಗಳನ್ನು ಅರಿತರೆ ಅದಕ್ಕಿಂತ ಆನಂದ ಇನ್ನೊಂದಿಲ್ಲ ಅನ್ನುತ್ತಾರೆ ಸ್ಥಾಪಕರು ಆದ ಗೋಪಾಲ ಕೃಷ್ಣ ರವರು.

ಬೆಳೆಯುವ ಪೈರು ಮೊಳಕೆಯಲ್ಲೇ

about4

ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ ಈ ಸಮಗ್ರ ಮೂಲವನ್ನು ಎಳೆ ವಯಸ್ಸಿನಲ್ಲೇ ಮಕ್ಕಳಿಗೆ ತಿಳಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ದೈವ ದತ್ತಾವಾಗಿ ಬಂದ ಭೂಮಿಯ ಒಡಲನ್ನು  ನೋಯಿಸದೆ ಮುಂದಿನ ಪೀಳಿಗೆಗೆ ವರ್ಗಾಯಿಸುವಂತ ನಿರಂತರ ಕೃಷಿ ಕಾಯಕವನ್ನು ಮಕ್ಕಳಲ್ಲಿ ಬಿತ್ತುವ ಒಂದು ಪ್ರಯತ್ನ ಮಾತ್ರ ನೆಲದ ಸಿರಿ ಬಯಸುತ್ತದೆ. ರೈತನಿಗೆ ವರ್ಷಾ ಪೂರ್ತಿ ಒಂದಲ್ಲ ಒಂದು ವರಮಾನ ಕಲ್ಪಿಸುವ ಗುರಿಯೇ ಸಮಗ್ರ ಕೃಷಿ. ನೆಲದಸಿರಿಗೆ ಪ್ರವೇಶ ಉಚಿತ ಮತ್ತು ವಯಸ್ಸಿನ ನಿರ್ಬಂಧವಿಲ್ಲ. ಶಾಲಾ ಮಕ್ಕಳಿಗೆ ಮೊದಲ ಆದ್ಯತೆ. ಊಟ ತಿಂಡಿಯ ವ್ಯವಸ್ಥೆ ಇರುತ್ತದೆ ( ಶುಲ್ಕ ದೊಂದಿಗೆ ). ಶೈಕ್ಷಣಿಕ ಸಂಸ್ಥೆಗಳೇ ವಾಹನ ಮಾಡಿಕೊಂಡು ಬರಬೇಕು. ಬೆಂಗಳೂರಿಂದ ಕೇವಲ 20 ಕಿಲೋ ಮೀಟರ್ ದೂರ. ಮಾಗಡಿ ರಸ್ತೆಯ ತಾವರೆಕೆರೆ ಹತ್ತಿರ. ಸಂಪರ್ಕಕ್ಕೆ ಕರೆ ಮಾಡಿ 7204899097 – 9902540809

nelada siri, Agro theme park

At nelada siri, Agro theme park, suited near thavarekere on magadi road, one can enjoy and relax in the richest bio diversity park. You can experience ultimate relaxation in the lap of nature, surrounded by tree and magical places to refresh your mind, body and even boost your memory. An ideal place to set your kids free to do whatever they want untill they get tired. A place were all the goodness of mother earth meets. Isolated from all sort of pollution, feel its time to breath some real fresh air, then visit to agro theme park “Nelada Siri”.